ರೇಷ್ಮೆಗೂಡಿನ ಬೆಲೆ ದಿಡೀರ್ ಏರಿಕೆ: ಕೆಜಿ ರೇಷ್ಮೆ ಗೂಡಿಗೆ ಎಷ್ಟಿದೆ ದರ? ಇಲ್ಲಿದೆ ವಿವರ
ವೀರಾಪುರ ಮಂಜುನಾಥ್ ಶಿಡ್ಲಘಟ್ಟ ಬೆಂಗಳೂರು: ಕುಸಿದಿದ್ದ ರೇಷ್ಮೆಗೂಡಿನ ಬೆಲೆ ದಿನ ಕಳೆದಂತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಳೆದ ವಾರದಿಂದೀಚೆಗೆ ಬೆಲೆ ಏರತೊಡಗಿದ್ದು ಒಂದು ಕೆ.ಜಿ.ರೇಷ್ಮೆಗೂಡಿನ ಬೆಲೆ 350 ರೂ.ಗಳ ಗಡಿ ದಾಟಿದೆ. ಸರಾಸರಿ ಬೆಲೆಯೂ 300 ರೂಪಾಯಿಗಳ ಗಡಿ ಮುಟ್ಟಿದೆ. ಲಾಕ್‌ಡೌನ್ ದಿನಗಳು ಆರಂಭವಾಗುತ್ತಿದ್ದಂತೆ 450 ರೂಪಾಯಿಗಳ ಆಸುಪಾಸಿನಲ್ಲಿದ್ದ ರೇಷ್ಮೆಗೂಡಿನ ಬೆಲೆ ಕುಸಿಯಲಾರಂಭಿಸಿ ಗರಿಷ್ಠ ಬೆಲೆ 250ರ ಆಸುಪಾಸಿಗೆ ಬಂದು ನಿಂತಿತ್ತು. ಕುಸಿದಿದ್ದ ಬೆಲೆ, ಬೇಡಿಕೆ: ಮದುವೆ ಮುಂತಾದ ಶುಭ ಸಮಾರಂಭಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಕಾರಣ ರೇಷ್ಮೆ ವಸ್ತ್ರಗಳ ಮಾರಾಟ ಇಲ್ಲದ ಕಾರಣ ಬೇಡಿಕೆ....